ಈ ವಿರಾಟ್ ವಿಶ್ವವನ್ನೇ ಪರಿಚಯಿಸಿದ.... ಅಮ್ಮಾ.... ನಿನಗೆ ಕೃತಜ್ಞತೆಗಳು .
ಈ ವಿಶ್ವದ ಪರಿಭ್ರಮಣದೊ೦ದಿಗೇ ನಾನೂ ಪರಿಭ್ರಮಿಸುತ್ತಿದ್ದೇನೆ. ನನ್ನ ಸುತ್ತಲಿನ ಸು೦ದರ ಪ್ರಕೃತಿ, ಅದರ ವಿಕೋಪಗಳು, ಇಲ್ಲಿನ ಮಾನವ ನಿರ್ಮಿತ ಅದ್ಭುತಗಳು, ಶಬ್ದಕ್ಕೆ ನಿಲುಕದ ಅವನ ಬುದ್ಧಿ ಸಾಮರ್ಥ್ಯ, ಅವೆಲ್ಲವನ್ನೂ ಮೀರಿ ನಿಲ್ಲುತ್ತಿರುವ ಇತ್ತೀಚೆಗಿನ ಅವನ ಮನೋದೌರ್ಬಲ್ಯ, ಈ ಸೃಷ್ಟಿಯ ವೈಚಿತ್ರ್ಯಗಳು, ಪ್ರಕೃತಿಯೊಂದಿಗೆ ಮಿಳಿತವಾಗಿರುವ ಈ ಜೀವ ಜಗತ್ತು, ಇವಕ್ಕೆಲ್ಲ ಕಾರಣೀಭೂತನಾದ ಆ ಸೂತ್ರಧಾರ ಯಾರೋ? ಆತ ಎಲ್ಲಿದ್ದಾನೋ? ಹೇಗಿದ್ದಾನೋ? ಈ ಪೈಪೋಟಿಯ ಪ್ರಪಂಚದಲ್ಲಿ ನನ್ನ ಸ್ಥಾನ ಎಲ್ಲೋ? ಅರಿವಿಗೇ ಮೀರಿದ ನನ್ನೊಳಗಿನ ಪ್ರಶ್ನೆಗಳು.....
ಈ ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿರುವ ನನಗೆ ಎಲ್ಲವೂ ಅಯೋಮಯ......
ಕೊನೆಯಲ್ಲಿ ಅನ್ನಿಸುವುದೊಂದೇ ........
"ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು. "
Take a bet, nee vanndina book bareyagidre kelu..
ReplyDeleteI just loved this blog-post it..
ಯೆ, ನಾ ಈ bet ನಲ್ಲಿ ಸೋಲುಲೇ ಇಷ್ಟ ಪಡ್ತ್ನೋ.. ನೀನೆ ಗೆದ್ಬುಡು :) ಹೆಂಗ್ ಮಾಡ್ದ್ರು ಗೆಲವು ನಂದೆಯಾ.. ಹ ಹ್ಹ ಹ್ಹಾ !
ReplyDelete