Friday, June 10, 2011

ಸಾವಿಗೆ ರಹದಾರಿ

             ಹಾಲು ಕುಡಿಯಬೇಕಾದ ಮಕ್ಕಳಿಗೆ ಟಾರ್, ಕಾರ್ಬನ್ ಮೊನೋಕ್ಸೈಡ್, ಅರ್ಸೆನಿಕ್, ಅಮೋನಿಯ, ಹೈಡ್ರೋಜೆನ್ ಸೈನೈಡ್, ಟೊಬ್ಯಾಕೋ ಗಳಂತಹ  ಹಾಲಾಹಲ. ಒಗಟಾಗಿ ಕಾಣುತ್ತಿದೆಯೇ? ಇಷ್ಟೊಂದು ವಿಷ ಪದಾರ್ಥಗಳ ಅಪೂರ್ವ ಮಿಳಿತವೇ ಸಿಗರೇಟ್. ದೊಡ್ಡವರ ಕೈಯಲ್ಲಿ ಸಿಗರೇಟ್ ಕಂಡದ್ದು ಹೊಸದೇನಲ್ಲ. ಆದರೆ ಈಗ ಚಿಕ್ಕ ಮಕ್ಕಳೂ ಅದರಿಂದ ಹೊರತಾಗಿಲ್ಲ ಎಂಬುದು ಕಟುಸತ್ಯ. ಬಾಲ್ಯದಿಂದಲೇ ಒತ್ತಡ ಹಾಗೂ ಸ್ಪರ್ಧಾತ್ಮಕ ಬದುಕು. ಇಂತಹ peer pressure ನಲ್ಲಿ ಪಾಲಕರ ಪಾತ್ರ ಅತಿ ಮಹತ್ವದ್ದಾಗಿರುತ್ತದೆ. ಆ ಮಕ್ಕಳಲ್ಲಿ ಆತ್ಮಾಭಿಮಾನ, ಆತ್ಮವಿಶ್ವಾಸ ಹೆಚ್ಚುವಂತೆ ನೋಡಿಕೊಂಡರೆ ಸಮಾಜ, ಸಹವಾಸ ದುಶ್ಚಟಗಳ ಆಮಿಶ ಒಡ್ಡಿದರೂ ಖಡಾಖಂಡಿತವಾಗಿ ’No’ ಎಂದು ಯಾವುದೇ ಭಯವಿಲ್ಲದೆ ಉತ್ತರಿಸುವ ಮನಸ್ಥಿತಿ ಅವರದ್ದಾಗಬಹುದು.

             ಹಾಂ, ಮೊದಲು ನೀ ಮಾಡು, ನಂತರ ಪಾಠ ಹೇಳು. ನೀವು ಸಿಗರೇಟಿನ ಗುಲಾಮರೆ? ಮೊದಲು ಅದನ್ನು ನಿಮ್ಮಿಂದ ದೂರಾಗಿಸಿ. ನಂತರ ಮಕ್ಕಳ ಮಾತು. ನೀವು ಹೇಳಬಹುದು, ದಿನಕ್ಕೆ 3-5 ಸಿಗರೇಟ್ ಮಾತ್ರ ಎಂದು, ದಿನಕ್ಕೆ 2-3 ಪ್ಯಾಕಿಗಿಂತ ಇದು ಲೇಸು ಎಂದು. ಹಾಗೆ ತಿಳಿದಿದ್ದಲ್ಲಿ ಅದು (dead wrong) ಖಂಡಿತಾ ತಪ್ಪು. ನೀವು ಸೇದುವ ಪ್ರತಿಯೊಂದು ಸಿಗರೇಟ್ ಕೂಡ ಸಾವನ್ನು ನಿಮ್ಮ ಹತ್ತಿರಕ್ಕೆ ಕರೆತಂದಂತೆ.
             ನೀವು ಸೇದುವುದನ್ನು ಕಂಡ ಮಕ್ಕಳು, ಹಾಂ, ಸೇದುವುದು ತಪ್ಪೇನಲ್ಲ ಎಂಬ ಭಾವನೆಗೆ ಸ್ಥಿರವಾಗುತ್ತಾರೆ. ಅಪ್ಪ ಸಿಗರೇಟ್ ಸೇದುತ್ತಾನೆ, ಅಪ್ಪ ಮಾಡುವಾಗ ನಾನ್ಯಾಕೆ ಮಾಡಬಾರದು? ಆಗ ಅಪ್ಪನಾದವನು ಮಗನಿಗೆ ಹೇಳುವ ಹಕ್ಕನ್ನು ಕಳೆದುಕೊಳ್ಳುತ್ತಾನೆ. ಅಪ್ಪಾ, ನೀನೆ ನಿನ್ನ ಮಗನಿಗೆ ರೋಲ್ ಮೋಡೆಲ್ ಆದೆ ಅಲ್ವಾ? ಶುರುವಿನಲ್ಲಿ ಮಕ್ಕಳು ದಿನಕ್ಕೆ 4 ಸಿಗರೇಟಿನಂತೆ ಸೇದಿ, ತದನಂತರವೂ ತಮ್ಮ ಆರೋಗ್ಯ ಹಾಳಾಗದ್ದನ್ನು ಗಮನಿಸಿ ಅದನ್ನು ಮುಂದುವರಿಸುವರು. ಮೊದಮೊದಲು 4, ಕೊನೆಕೊನೆಗೆ 40. scary!! Isn’t it? 
             ಸಿಗರೇಟನ್ನು ದೂರವಿರಿಸುವ ಅಥವ ಮೈಗೂಡಿಸಿಕೊಳ್ಳುವ ಬಗ್ಗೆ ನಿಮಗೆ ಯೋಚನೆಗಳಿದ್ದರೆ ಕೆಲವು ಮಾಹಿತಿ ಇಲ್ಲಿದೆ.
ನೀವು ಸೇದುವ ಪ್ರತಿಯೊಂದು ಸಿಗರೇಟ್ ಕೂಡ ನಿಮ್ಮ ಜೀವಿತಾವಧಿಯ 11 ನಿಮಿಷಗಳನ್ನು ಕಡಿಮೆಗೊಳಿಸುತ್ತದೆ! ಗಾಬರಿಯಾಯಿತೆ?
ಶ್ವಾಸಕೋಶಗಳ ಶ್ರಾದ್ಧಕ್ಕೆ ಮುನ್ನುಡಿ ಈ ಸಿಗರೇಟ್. ಒಟ್ಟು 4000 ರಾಸಾಯನಿಕಗಳು ಒಂದು ಸಿಗರೇಟಿನಲ್ಲಿರುತ್ತವೆ.
* ಉಳಿದ ರಾಸಾಯನಿಕ ವಿಷಗಳನ್ನು ನಮ್ಮ ರಕ್ತದಲ್ಲಿ ಸೇರುವಂತೆ ಮಾಡಿ, ಮುಖ್ಯವಾಗಿ ಕ್ಯಾನ್ಸರ್ ಗೆ ಕಾರಣವಾಗುವ Tar,
* ರಕ್ತದಲ್ಲಿನ ಆಮ್ಲಜನಕ (Oxygen)ದ ಪ್ರಮಾಣವನ್ನು ಕಡಿಮೆ ಮಾಡಿ, ಹ್ರದಯದ ಕಾರ್ಯಗಳಿಗೆ ತೊಂದರೆಯೊಡ್ಡುವ Carbon Monoxide,
* ಸತ್ತ ದೇಹಗಳನ್ನು ಸುಸ್ಥಿಥಿಯಲ್ಲಿಡಲು ಬಳಸುವ Formaldehyde,
* ಡೈ ಗಳಲ್ಲಿ ಬಳಸುವ Benzene,
* ಬ್ಯಾಟರಿಗಳನ್ನು ಮಾಡಲು ಬಳಸುವ Cadmium,
* ಸಿಗರೇಟಿನ ಅಭ್ಯಾಸಕ್ಕೆ ವಶವಾಗುವಂತೆ ಮಾಡುವ Nicotine,
* ನೇಲ್ ಪಾಲಿಶ್ ರಿಮೂವರ್ ಗಳಲ್ಲಿ ಬಳಸುವ Acetone,
* Arsenic, Ammonia, Lead, Mercury ಹಾಗೂ Hydrogen Cyanide ನಂತಹ ವಿಷ ಪದಾರ್ಥಗಳನ್ನೂ ಒಳಗೊಂಡಿರುತ್ತದೆ ee sigarette.
            ನಿಮ್ಮ ಸಿಗರೇಟ್ ಸೇದುವಿಕೆಯಿಂದ ನಿಮಗಷ್ಟೇ ಹಾನಿ ಎಂದು ತಿಳಿಯಬೇಡಿ. ಅದು ನಿಮ್ಮ ಸುತ್ತಮುತ್ತಲಿನವರನ್ನೂ ಹಾನಿಗೊಳಗಾಗಿಸಿರುತ್ತದೆ. ಅದು ನೀವು ಬಿಡುವ second hand smokeನಿಂದ, ಅದನ್ನು ಅವರು ಉಸಿರಾಡುವ ಕ್ರಿಯೆಯಿಂದ.
            ಹಾಂ, ಹಲವಾರು ವರ್ಷಗಳಿಂದ ನೀವು ಸಿಗರೇಟಿನ ಗುಲಾಮರಾಗಿದ್ದು, ಒಂದೇ ಸಲಕ್ಕೆ ಅದರಿಂದ ಹೊರಬಂದರೆ ನಿಮ್ಮ ಆರೋಗ್ಯ ಮತ್ತೆ ಮೊದಲಿನಂತೆ ಆಗುತ್ತದೆ ಎಂಬ ಭ್ರಮೆಯಲ್ಲಿರಬೇಡಿ. ಅದು ಆಗುವುದಿಲ್ಲ. ತಾನು ಮಾಡಬೇಕಾದ, ಮಾಡಬಹುದಾದ ಹಾನಿಯನ್ನು ಆ ಸಿಗರೇಟ್ ಮಾಡಿಯೇಬಿಟ್ಟಿರುತ್ತದೆ. ಅದೂ irriversible, ಮುಖ್ಯವಾಗಿ ನಿಮ್ಮ ಲಂಗ್ಸ್ ಗಳಿಗೆ. ಆದ್ದರಿಂದ ವಾಸ್ತವಕ್ಕಿಂತ ಹೆಚ್ಚಿನದ್ದನ್ನು ಅಪೇಕ್ಷಿಸಬೇಡಿ.

              ಹಾಗೆಂದು ಸಿಗರೇಟಿನಿಂದ ಹೊರಬಂದರೆ ಲಾಭವೇ ಇಲ್ಲ ಎಂದೇನಿಲ್ಲ. ಬಿಡಲು ಎಂದೂ ತಡವಲ್ಲ. ಅದನ್ನು ಯಾವಾಗ ತ್ಯಜಿಸಿದರೂ ಸರಿ, ನಿಮ್ಮ ದೇಹ ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳುತ್ತದೆ. ಅದನ್ನು ನೀವೇ ಗಮನಿಸಬಹುದು.
* ವಾಸನೆಯ ಗ್ರಹಿಕೆಯಲ್ಲಿ, ನಾಲಿಗೆ ರುಚಿಯ ಆಸ್ವಾದನೆಯಲ್ಲಿ ಸುಧಾರಣೆಯಾಗುತ್ತದೆ.
* ನಿಮ್ಮ ಉಸಿರಿಗೆ ಹೆಚ್ಚಿನ ಉತ್ಸಾಹ ಬಂದಿರುತ್ತದೆ.
* ರಕ್ತದ ಪರಿಚಲನೆ ಸುಧಾರಣೆಗೊಳ್ಳುತ್ತದೆ.
* ಆರ್ಟೆರೀಗಳ(arteries) ಮೇಲಿನ ಒತ್ತಡ ಕಡಿಮೆಯಾಗಿ ಹ್ರದಯದ ರೋಗಗಳೂ ಹಿಡಿತಕ್ಕೆ ಬರುತ್ತದೆ.
* ನಿಮ್ಮ ದೇಹ ಕ್ಯಾನ್ಸರ್ ಗಳನ್ನು ಕೋಂಟ್ರಾಕ್ಟಿಗೆ ತೆಗೆದುಕೊಳ್ಳುವ ಪ್ರಮಾಣವನ್ನೂ ಕಡಿಮೆಗೊಳ್ಳುತ್ತದೆ.
                 ಇಷ್ಟು ಸಾಕಲ್ಲವೇ ಸಿಗರೇಟನ್ನು ದೂರವಿಡಲು??


                                            - ಇಂಟರ್ ನೆಟ್ ನ ಸಹಕಾರದೊಂದಿಗೆ      
                                                             ಶ್ರುತಿ ಭಟ್.

..........................................


Give me some hope,
strengthen my trust on myself..
Give me the comfort,
console me for my fear about my future..
Give me the power,
to see the fruit at the end of my duties..

That will be the beginning of my happiness,
End of all the overheads,
uff.. finally a relief to me......